ಸದಾ ನಾನಂದುಕೊಳ್ಳುತ್ತೇನೆ
ಏನಾಗುತ್ತಿತ್ತು ಅಂದು ಆ ದಿನ ಬರದೇ ಇದ್ದಿದ್ದರೆ?
ನೀನೆನ್ನ ಮನೆ-ಮನದ ಹೊಸ್ತಿಲ ತುಳಿಯದಿದ್ದಿದ್ದರೆ?
ನಿನ್ನೊಡನೆ ಬದುಕನುಣುವ ಭಾಗ್ಯ ಲಭಿಸದಿದ್ದಿದ್ದರೆ?
ಸಾಯುತ್ತಿರಲಿಲ್ಲವೇನೋ ದಿಢೀರನೆ
ಉಸಿರು ನಿಂತುಹೋಗಿ
ಆದರೆ ಬದುಕುತ್ತಿರಲಿಲ್ಲ ದೇವರಾಣೆ
ಹೀಗೆ ಮನುಷ್ಯನಾಗಿ...
ಹೀಗೆ ಮನುಷ್ಯನಾಗಿ...