Saturday, June 20, 2020

ಅಪ್ಪಾ...


"ಅಪ್ಪಾ" ಎಂಬ ಎರಡಕ್ಷರದಲಿ
ಅದೇನು ಮಾಯೆಯಡಗಿಹುದೋ!

ಅಮ್ಮನಂತೆ ಅಪ್ಪಿ ಹಿಡಿದು "ಮಗನೇ" ಎನ್ನಲಿಲ್ಲ
ಮಡದಿಯಂತೆ ಮೈಸವರಿ "ಐ ಲವ್ ಯೂ" ಎನ್ನಲಿಲ್ಲ

ಆದರೇನಂತೆ...

ನಾ ಬಿದ್ದಾಗ ಹಿಡಿದೆತ್ತುವ ನಿನ್ನ ತೋಳ್ಗಳೇ ಸಾಕೆನಗೆ
ಮತ್ತೆ ಮತ್ತೆ ಎದ್ದು ನಡೆಯಲು

ನಾ ಗೆದ್ದಾಗ ನಿನ್ನ ಕಣ್ತುಂಬುವ ಅಶ್ರುಬಿಂಧು ಸಾಕೆನಗೆ
ಮತ್ತೆ ಮತ್ತೆ ಗೆದ್ದು ಬರಲು...

ಉಸಿರೊಳಗೆ ಉಸಿರಾಗಿ ಚಿರಕಾಲ ಉಳಿದಿರು
ಓ ಎನ್ನ ಜೀವದಾತ...

Schön, dass Sie da sind…

  “Schön, dass Sie da sind” I was amused, excited and also confused What does it really connote? I asked google, searching for the immin...