ದಿಬ್ಬವನು ಕಂಡು ದೊಬ್ಬೆಂದು ನೆಲಕುರುಳಿ
ಸುತ್ತನಿಂತ ಪ್ರೇತಗಳ ಉಬ್ಬುಹಲ್ಲಿನ ಜಳಪಿಗೆ
ಬಡಕಲು ದೇಹದ ಈ ಪಕೀರ
ಅನ್ನವನು ಅರಸಿ ಹೊರಟ ಬಿಡುಬಾಯಿಗೆ
ದಿಗಂತದಾಚೆಯ ಬಿಳಿಚುಕ್ಕಿಯ ಬಯಕೆಯೇ
ನಡುಹಗಲು ನೀರನರಸಿ ಚಾಚಿದ ಬೊಗಸೆಗೆ
ಸಾಗರದಾಳದ ಸ್ಪುಟ ಹವಳದ ತವಕವೇ
ಅದಾವ ಇಂಗದ ದಾಹವೋ ಈ ಬೆತ್ತಲೆ ಪಾದಗಳ ಪಕೀರನಿಗೆ
ಅವ ಕರಿಯ, ಅದು ಅವನ ಮೈಬಣ್ಣ
ಅಲ್ಲಿ, ಊರ ಹೊರಗೆ ಅವ ಹುಟ್ಟಿದ್ದು
ಅದೇ, ಉಪ್ಪಾರರ ಕೇರಿಯೊಳಗೆ
ಅದೂ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವೇ
ಅಂದೇ ಬಾಯಿ ಬಿಟ್ಟಿದ್ದ ಆ ಬರಿ ಮೈಯ ಪಕೀರ
ಸ್ವಾತಂತ್ರ್ಯ? ಅದೊಂದು ಕೆಟ್ಟ ಶಬ್ಧ...
ಎಂದಿಗೂ ಅರ್ಥವಾಗದ ಕಟಿಣ ಪದಬಂಧ
ಸಾಯುತ್ತಾ ಚೆನ್ನಿ ಕೂಗಿದ್ದಳು, 'ಸ್ವಾತಂತ್ರ್ಯವಂತೆ ಸ್ವಾತಂತ್ರ್ಯ
ಕಾಳುಸಂತೆಕೋರರ ಹೆಣ ಸ್ವಾತಂತ್ರ್ಯ'
ಏನೊಂದೂ ಅರ್ಥವಾಗದೆ ನಕ್ಕಿದ್ದ ಆ ಬಿಡುಬಾಯಿ ಪಕೀರ
ಈಗ ಹಗಲಿಡೀ ಈತ ಅಲೆಯುವುದು ಊರ ಒಳಗೆ
ಮುದ್ದಿನ ಚೆನ್ನಿ ಇಲ್ಲೇ ತಾನೇ ಹೆಣವಾಗಿ ಮಲಗಿದ್ದು
ಶಾನುಭೋಗರ ಮಗನ ಪಂಚೆಯ ಮೇಲೆ!
ಚೆನ್ನಿಯ ಕನವೋ, ಸ್ವಾತಂತ್ರ್ಯದ ಮರುಳೋ,
ಏನದು ಕೇರಿ ಬಿಟ್ಟು ಊರಲೆಯುವ ಈ ಪಕೀರನ ಗೋಳು?
ಸುತ್ತನಿಂತ ಪ್ರೇತಗಳ ಉಬ್ಬುಹಲ್ಲಿನ ಜಳಪಿಗೆ
ಕಿಟಾರನೆ ಕಿರುಚಿ ಕೇರಿ ಬಿಟ್ಟ ಗಳಿಗೆ
ಕಾಣಲಿಲ್ಲವೇ ಬಿಡುಗಡೆಯ ಕನಸುಬಡಕಲು ದೇಹದ ಈ ಪಕೀರ
ಅನ್ನವನು ಅರಸಿ ಹೊರಟ ಬಿಡುಬಾಯಿಗೆ
ದಿಗಂತದಾಚೆಯ ಬಿಳಿಚುಕ್ಕಿಯ ಬಯಕೆಯೇ
ನಡುಹಗಲು ನೀರನರಸಿ ಚಾಚಿದ ಬೊಗಸೆಗೆ
ಸಾಗರದಾಳದ ಸ್ಪುಟ ಹವಳದ ತವಕವೇ
ಅದಾವ ಇಂಗದ ದಾಹವೋ ಈ ಬೆತ್ತಲೆ ಪಾದಗಳ ಪಕೀರನಿಗೆ
ಅವ ಕರಿಯ, ಅದು ಅವನ ಮೈಬಣ್ಣ
ಅಲ್ಲಿ, ಊರ ಹೊರಗೆ ಅವ ಹುಟ್ಟಿದ್ದು
ಅದೇ, ಉಪ್ಪಾರರ ಕೇರಿಯೊಳಗೆ
ಅದೂ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನವೇ
ಅಂದೇ ಬಾಯಿ ಬಿಟ್ಟಿದ್ದ ಆ ಬರಿ ಮೈಯ ಪಕೀರ
ಸ್ವಾತಂತ್ರ್ಯ? ಅದೊಂದು ಕೆಟ್ಟ ಶಬ್ಧ...
ಎಂದಿಗೂ ಅರ್ಥವಾಗದ ಕಟಿಣ ಪದಬಂಧ
ಸಾಯುತ್ತಾ ಚೆನ್ನಿ ಕೂಗಿದ್ದಳು, 'ಸ್ವಾತಂತ್ರ್ಯವಂತೆ ಸ್ವಾತಂತ್ರ್ಯ
ಕಾಳುಸಂತೆಕೋರರ ಹೆಣ ಸ್ವಾತಂತ್ರ್ಯ'
ಏನೊಂದೂ ಅರ್ಥವಾಗದೆ ನಕ್ಕಿದ್ದ ಆ ಬಿಡುಬಾಯಿ ಪಕೀರ
ಈಗ ಹಗಲಿಡೀ ಈತ ಅಲೆಯುವುದು ಊರ ಒಳಗೆ
ಮುದ್ದಿನ ಚೆನ್ನಿ ಇಲ್ಲೇ ತಾನೇ ಹೆಣವಾಗಿ ಮಲಗಿದ್ದು
ಶಾನುಭೋಗರ ಮಗನ ಪಂಚೆಯ ಮೇಲೆ!
ಚೆನ್ನಿಯ ಕನವೋ, ಸ್ವಾತಂತ್ರ್ಯದ ಮರುಳೋ,
ಏನದು ಕೇರಿ ಬಿಟ್ಟು ಊರಲೆಯುವ ಈ ಪಕೀರನ ಗೋಳು?